ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ನೀವು ತ್ವಚೆಗೆ ಹಚ್ಚಿದರೆ, ತ್ವಚೆಯು ಎಣ್ಣೆಯುಕ್ತವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರು ಎಣ್ಣೆ ಚರ್ಮವನ್ನು ಹೊಂದಿರುತ್ತಾರೆ ಅಂತಹವರಿಗೆ ಇದು ಖಂಡಿತ ಸಾಧ್ಯವಲ್ಲದ ಮಾತು. ಎಣ್ಣೆ ತ್ವಚೆಯನ್ನು ಉಪಚರಿಸಲು ನೈಸರ್ಗಿಕವಾದ ಮನೆಯಲ್ಲೇ ತಯಾರಿಸಬಹುದಾದ ಪರಿಹಾರಗಳನ್ನು ಪ್ರಯತ್ನಿಸಿ. ಅದಕ್ಕೆಂದೇ ನಾವಿಂದು ಸರಳ ಪರಹಾರ ನೀಡುತ್ತಿದ್ದೇವೆ ಅದೇ ಟೊಮೇಟೊ ಫೇಸ್ ಪ್ಯಾಕ್. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ತರಕಾರಿ ಟೊಮೇಟೊ. ಟೊಮೇಟೊವನ್ನು ಅಡುಗೆಗೆ ಬಳಸುವುದನ್ನು ಹೊರತುಪಡಿಸಿ ಅದರಿಂದ ನಾವು ಪಡೆಯಬಹುದಾದ ಸೌಂದರ್ಯ ಪ್ರಯೋಜನಗಳನ್ನು ಅರಿತುಕೊಳ್ಳಿ. ಮನೆಯಲ್ಲೇ ತಯಾರಿಸಬಹುದಾದ ಹಲವಾರು ಬಗೆಯ ಫೇಸ್‌ಪ್ಯಾಕ್‌ಗಳನ್ನು ಟೊಮೇಟೊದಿಂದ ತಯಾರಿಸಲಾಗುತ್ತದೆ. ನಿಮ್ಮ ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ನಿವಾರಿಸುವಲ್ಲಿ ಟೊಮೇಟೊ ಸಹಕಾರಿ. ಟೊಮೇಟೊದಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು ನಿಮ್ಮ ತ್ವಚೆಯನ್ನು ತಾರುಣ್ಯಭರಿತವಾಗಿ ಮತ್ತು ದೀರ್ಘಕಾಲದವರೆಗೆ ಸ್ವಚ್ಚವಾಗಿ ಕಾಣುವಂತೆ ಮಾಡುತ್ತದೆ. ಟೊಮೇಟೊವನ್ನು ನೀವು ಹಾಗೆಯೇ ಇಡಿಯಾಗಿ ಕೂಡ ಹಚ್ಚಿಕೊಳ್ಳಬಹುದು ಅಥವಾ ಅದರ ರಸವನ್ನು ತೆಗೆದು ಕೂಡ ಮುಖಕ್ಕೆ ಲೇಪಿಸಿಕೊಳ್ಳಬಹುದು. ಟೊಮೇಟೊ ಮಾತ್ರವಲ್ಲದೆ ಅದರ ರಸ ಕೂಡ ತ್ವಚೆಗೆ ತುಂಬಾ ಉತ್ತಮ. ಮುಖದಲ್ಲಿರುವ ರಂಧ್ರಗಳು, ಮೊಡವೆ ಹಾಗೂ ಕಪ್ಪುಕಲೆಗಳನ್ನು ಕೂಡ ನಿವಾರಿಸುತ್ತದೆ. ಮುಖ್ಯವಾಗಿ ಎಣ್ಣೆಯುಕ್ತ ತ್ವಚೆಯನ್ನು ಆರೈಕೆ ಮಾಡಲು ಟೊಮೇಟೊ ರಸ ರಾಮಬಾಣವಾಗಿದೆ.